‘ಕನಸೊಂದು ಶುರುವಾಗಿದೆ’ ಟ್ರೇಲರ್ ಹೀಗಿದೆ…

ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಸಬರ ಚಿತ್ರ
ಮಾಸ್ ಕಂಟೆಂಟ್ ಜೊತೆಗೆ ನವಿರಾದ ಎಂಟರ್‌ಟೈನ್ಮೆಂಟ್…
ಹೊರಬಂತು ‘ಕನಸೊಂದು ಶುರುವಾಗಿದೆ’ ಟ್ರೇಲರ್
ಯುವನಟ ಸಂತೋಷ್ ಬಿಲ್ಲವ ನಾಯಕನಾಗಿ ಅಭಿನಯಿಸಿರುವ ‘ಕನಸೊಂದು ಶುರುವಾಗಿದೆ’ ಚಿತ್ರ ಇದೇ ಮಾರ್ಚ್ 07ಕ್ಕೆ ತೆರೆಗೆ ಬರುತ್ತಿದೆ. ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ನಟರಾದ ಡಾರ್ಲಿಂಗ್ ಕೃಷ್ಣ, ಲೂಸ್ ಮಾದ ಯೋಗಿ, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮೊದಲಾದವರು ‘ಕನಸೊಂದು ಶುರುವಾಗಿದೆ’ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದರು.
‘ಕನಸೊಂದು ಶುರುವಾಗಿದೆ’ ಚಿತ್ರದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಹೇಗಿದೆ ‘ಕನಸೊಂದು ಶುರುವಾಗಿದೆ’ ಟ್ರೇಲರ್
ಇನ್ನು ಬಿಡುಗಡೆಯಾಗಿರುವ ‘ಕನಸೊಂದು ಶುರುವಾಗಿದೆ’ ಚಿತ್ರದ ಟ್ರೇಲರಿನಲ್ಲಿ ಲವ್ ಜೊತೆಗೆ ಸಸ್ಪೆನ್ಸ್-ಥ್ರಿಲ್ಲರ್ ಅಂಶಗಳ ಎಳೆಯನ್ನು ತೋರಿಸಲಾಗಿದೆ. ಮೆಲೋಡಿ ಹಾಡು, ಆ್ಯಕ್ಷನ್, ಸೆಂಟಿಮೆಂಟ್ ಹೀಗೆ ಎಲ್ಲಾ ಥರದ ಮನರಂಜನಾತ್ಮಕ ಅಂಶಗಳನ್ನೂ ‘ಕನಸೊಂದು ಶುರುವಾಗಿದೆ’ ಟ್ರೇಲರಿನಲ್ಲಿ ಕಟ್ಟಿಕೊಡಲಾಗಿದೆ. ‘ಕೆ.ಆರ್.ಆರ್ ಮೀಡಿಯಾ ಬ್ಯಾನರ್’ ನಡಿ ಲಕ್ಷ್ಮೀ ಕಾಂತ್ ರೆಡ್ಡಿ ನಿರ್ಮಿಸಿರುವ ‘ಕನಸೊಂದು ಶುರುವಾಗಿದೆ’ ಚಿತ್ರ ಮಂಜೇಶ್ ಭಾಗವತ್ ನಿರ್ದೇಶನದಲ್ಲಿ ಮೂಡಿಬಂದಿದೆ.
ನಾಯಕ ಸಂತೋಷ್ ಬಿಲ್ಲವಗೆ ಜೋಡಿಯಾಗಿ ನಟಿ ಸಾತ್ವಿಕಾ ಕಾಣಿಸಿಕೊಂಡಿದ್ದಾರೆ. ಥ್ರಿಲ್ಲರ್ ಮಂಜು, ಕುರಿ ಸುನಿಲ್ , ರಶ್ಮಿ, ರಾಜು ಕಾಲ್ಕುಣಿ, ಕೃಷ್ಣಮೂರ್ತಿ ಕನಕಪುರ, ನಾಗರತ್ನ ಭಟ್ ತಾರಾಬಳಗದಲ್ಲಿದ್ದಾರೆ. ಬೆಂಗಳೂರು, ಕುಂದಾಪುರ, ಕುಣಿಗಲ್ ಸುತ್ತಮುತ್ತ ‘ಕನಸೊಂದು ಶುರುವಾಗಿದೆ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕ್ಯಾಮೆರಾ, ದೀಪಕ್ ಸಿ. ಎಸ್ ಗೌಡ ಸಂಕಲನ, ಸೂರಜ್ ಜೋಯಿಸ್ ಸಂಗೀತದ ಜವಾಬ್ದಾರಿ ನಿಭಾಯಿಸಿದ್ದಾರೆ. ಶಶಾಂಕ್, ಸಿಂಪಲ್ ಸುನಿ ಮತ್ತು ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಸೋನು ನಿಗಂ, ರಾಜೇಶ್ ಕೃಷ್ಣನ್, ವಾಸುಕಿ ವೈಭವ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.