ಟಾಲಿವುಡ್ ಆಯ್ತು.., ಈಗ ಕಾಲಿವುಡ್ ಚಿತ್ರದಲ್ಲಿ ದುನಿಯಾ ವಿಜಯ್!

ನಯನತಾರ ಚಿತ್ರದಲ್ಲಿ ‘ಸಲಗ’ ವಿಜಯ್ ಕುಮಾರ್ ವಿಲನ್
ಕಾಲಿವುಡ್ ನಲ್ಲಿ ‘ದುನಿಯಾ’ ವಿಜಯ್ ಯುಗಾರಂಭ
‘ಮೂಕುತಿ ಅಮ್ಮನ್-2’ಗೆ ವಿಜಯ್ ವಿಲನ್
ಟಾಲಿವುಡ್ ಅಂಗಳದಲ್ಲಿ ಬಾಲಯ್ಯನ ಎದುರು ವಿಲನ್ ಆಗಿ ಅಬ್ಬರಿಸಿ ‘ಸೈಮಾ’ ಮುಡಿಗೇರಿಸಿಕೊಂಡಿದ್ದ ವಿಜಯ್ ಕುಮಾರ್ ಗೆ ಈ ಮೂಲಕ ಮತ್ತೊಂದು ದೊಡ್ಡ ಅವಕಾಶ ಬಂದಿದೆ. ತಮಿಳಿನ ‘ಲೇಡಿ ಸೂಪರ್ ಸ್ಟಾರ್’ ನಯನತಾರ ಅಭಿನಯದ ‘ಮೂಕುತಿ ಅಮ್ಮನ್-2’ ಚಿತ್ರದಲ್ಲಿ ‘ಸಲಗ’ ವಿಜಯ್ ಕುಮಾರ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.
ಸದ್ಯ ಕನ್ನಡದಲ್ಲಿ ‘ಲ್ಯಾಂಡ್ ಲಾರ್ಡ್’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರೋ ವಿಜಯ್ ಕುಮಾರ್ ಜೊತೆಗೆ ತಮ್ಮದೇ ನಿರ್ದೇಶನದ ‘ಸಿಟಿ ಲೈಟ್ಸ್’ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ‘ಮೂಕುತಿ ಅಮ್ಮನ್- 2’ ಚಿತ್ರದಲ್ಲಿ ಅಭಿನಯಿಸ್ತಿದ್ದಾರೆ.