Pop Corner

‘ದಿ ಪ್ಯಾರಡೈಸ್’ ಮೊದಲ ಝಲಕ್ ರಿಲೀಸ್

‘ದಸರಾ’ ತಂಡದ ಮತ್ತೊಂದು ಸಿನೆಮಾ… 

‘ದಿ ಪ್ಯಾರಡೈಸ್’ ಝಲಕ್ ನಲ್ಲಿ ರಗಡ್ ಅವತಾರದಲ್ಲಿ ಅಬ್ಬರಿಸಿದ ನಾನಿ

ನ್ಯಾಚುರಲ್ ಸ್ಟಾರ್ ನಾನಿ ‘ರಾ ಸ್ಟೇಟ್ ಮೆಂಟ್’

‘ದಸರಾ’ ಸಿನೆಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದ ನ್ಯಾಚುರಲ್ ಸ್ಟಾರ್ ನಾನಿ ಈಗ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಮತ್ತೊಮ್ಮೆ ‘ದಸರಾ’ ತಂಡದ ಜೊತೆ ಕೈ ಜೋಡಿಸಿದ್ದಾರೆ. ನಿರ್ದೇಶಕ ಶ್ರೀಕಾಂತ್ ಒಡೆಲಾ ಸಾರಥ್ಯದ ‘ದಿ ಪ್ಯಾರಡೈಸ್’ ಸಿನೆಮಾದ ಮೊದಲ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ‘ರಾ ಸ್ಟೇಟ್ ಮೆಂಟ್’ ಎಂಬ ಟೈಟಲ್ ನಡಿ ರಿಲೀಸ್ ಆಗಿರುವ ಝಲಕ್ ಸಿಕ್ಕಪಟ್ಟೆ ರಾ ಹಾಗೂ ರಡಗ್ ಆಗಿದೆ.

ಮಾಸ್ ಗೆಟಪ್ ನಲ್ಲಿ ನಾನಿ

ಸಖತ್ ಮಾಸ್ ಆಗಿ ರಕ್ತಸಿಕ್ತ ಗೆಟಪ್ ನಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಕಾಣಿಸಿಕೊಂಡಿದ್ದಾರೆ. ಹಿಂದೆಂದೂ ಕಾಣದ ಹೊಸ ಲುಕ್ ನಲ್ಲಿ ನಾನಿ ಪ್ರತ್ಯಕ್ಷರಾಗಿದ್ದಾರೆ. ಈ ಹಿಂದೆ ‘ದಸರಾ’ ಸಿನೆಮಾ ನಿರ್ಮಿಸಿದ್ದ ಸುಧಾಕರ್ ಚೆರುಕುರಿ ಮತ್ತೊಮ್ಮೆ ನಾನಿ ಹಾಗೂ ಶ್ರೀಕಾಂತ್ ಒಡೆಲಾಗೆ ಸಾಥ್ ಕೊಡುತ್ತಿದ್ದಾರೆ. ‘ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನೆಮಾಸ್’ ಬ್ಯಾನರ್ ನಡಿ ಬಹಳ ಅದ್ಧೂರಿಯಾಗಿ ‘ದಿ ಪ್ಯಾರಡೈಸ್’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಪ್ಯಾನ್ ಇಂಡಿಯಾ ‘ದಿ ಪ್ಯಾರಡೈಸ್’ ಸಿನೆಮಾ

ರಾಕ್ ಸ್ಟಾರ್ ಅನಿರುದ್ಧ್ ರವಿಚಂದ್ರರ್ ಸಂಗೀತ ನಿರ್ದೇಶನ, ಜಿ. ಕೆ. ವಿಷ್ಣು ಛಾಯಾಗ್ರಹಣ, ನವೀನ್ ನೂಲಿ ಸಂಕಲನ ‘ದಿ ಪ್ಯಾರಡೈಸ್’ ಸಿನೆಮಾಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿ ಬರ್ತಿದ್ದು, ಸದ್ಯ ‘ದಿ ಪ್ಯಾರಡೈಸ್’ ಸಿನೆಮಾದ ಮೊದಲ ಝಲಕ್ ನ್ನು ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ. ‘ದಿ ಪ್ಯಾರಡೈಸ್’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಈ ಬಾರಿಯೂ‌ ನಿರ್ದೇಶಕ ಶ್ರೀಕಾಂತ್ ಒಡೆಲಾ ದೊಡ್ಡದಾಗಿ ಏನೋ ಮಾಡುವ ಮುನ್ಸೂಚನೆ ಕೊಟ್ಟಿದ್ದಾರೆ.

Related Posts

error: Content is protected !!