Video

‘ರಾವೆನ್‌’ ಟ್ರೇಲರ್‌ ನಲ್ಲಿ ಮಿಸ್ಟರಿ-ಕ್ರೈಂ ಝಲಕ್‌!

ಹೊರಬಂತು ‘ರಾವೆನ್‌’ ಚಿತ್ರದ ಫಸ್ಟ್‌ ಟ್ರೇಲರ್‌ 

ಕಾಗೆಯ ಮೇಲೊಂದು ಸಿನೆಮಾ ಮಾಡಿದ ಪ್ರಬೀಕ್‌ ಮತ್ತು ತಂಡ

ಶೀಘ್ರದಲ್ಲಿಯೇ ತೆರೆಗೆ ಬರಲು ‘ರಾವೆನ್‌’ ತಯಾರಿ

ಸೆಟ್ಟೇರಿದಾಗಿನಿಂದಲೂ ತನ್ನ ಟೈಟಲ್‌ ಮತ್ತು ಕಂಟೆಂಟ್‌ ಮೂಲಕ ಒಂದಷ್ಟು ಸಿನಿಮಂದಿಯ ಗಮನ ಸೆಳೆದಿದ್ದ ‘ರಾವೆನ್‌’ ಸಿನೆಮಾ ಇದೀಗ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿ, ತೆರೆಗೆ ಬರಲು ಸಿದ್ಧವಾಗಿದೆ. ಸುಮಾರು ಒಂದೂವರೆ ವರ್ಷಗಳ ಕಾಲ ಸಮಯ ತೆಗೆದುಕೊಂಡು ನಿರ್ಮಾಣವಾಗಿರುವ ‘ರಾವೆನ್‌’ ಇದೇ ಬೇಸಿಗೆ ಸಮಯದಲ್ಲಿ ಪ್ರೇಕ್ಷಕರ ಮುಂದೆ ಬರುವ ಯೋಜನೆ ಹಾಕಿಕೊಂಡಿದೆ. ಈಗಾಗಲೇ ‘ರಾವೆನ್‌’ ಸಿನೆಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ನಿಧಾನವಾಗಿ ‘ರಾವೆನ್‌’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. ಪ್ರಚಾರದ ಮೊದಲ ಭಾಗವಾಗಿ ಇತ್ತೀಚೆಗೆ ‘ರಾವೆನ್‌’ ಸಿನೆಮಾದ ಮೊದಲ ಟ್ರೇಲರ್‌ ಅಧಿಕೃತವಾಗಿ ಬಿಡುಗಡೆಯಾಗಿದೆ.

ಹೇಗಿದೆ ‘ರಾವೆನ್‌’ ಟ್ರೇಲರ್‌..?

‘ಮಾಸ್‌ ಮ್ಯೂಸಿಕ್‌ ಅಡ್ಡ’ ಯು-ಟ್ಯೂಬ್‌ ಚಾನೆಲ್‌ನಲ್ಲಿ ‘ರಾವೆನ್‌’ ಸಿನೆಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಇನ್ನು ಚಿತ್ರತಂಡ ಆರಂಭದಿಂದಲೂ ಹೇಳಿಕೊಂಡು ಬಂದಿರುವಂತೆ, ‘ರಾವೆನ್‌’ ಮಿಸ್ಟರಿ-ಕ್ರೈಂ ಕಥಾಹಂದರದ ಸಿನೆಮಾ. ಸದ್ಯ ಬಿಡುಗಡೆಯಾಗಿರುವ ‘ರಾವೆನ್‌’ ಟ್ರೇಲರ್‌ನಲ್ಲಿ ಕೂಡ ಸಿನೆಮಾದಲ್ಲಿರುವ ಮಿಸ್ಟರಿ, ಕ್ರೈಂ ಮತ್ತು ಥ್ರಿಲ್ಲರ್‌ ಅಂಶಗಳಿರುವ ಕಥಾಹಂದರದ ಸಣ್ಣ ಎಳೆಯನ್ನು ಬಿಟ್ಟುಕೊಡಲಾಗಿದೆ. ಒಂದು ಕಾಗೆಯ ಸುತ್ತ ಇಡೀ ಸಿನೆಮಾದ ಕಥೆ ಸಾಗುತ್ತದೆ, ಸತ್ಯ-ಧರ್ಮ, ಕರ್ಮಫಲಗಳಿಗೆ ಅದಕ್ಕೆ ತಕ್ಕಂತೆ ಪ್ರತಿಫಲ ನಿಶ್ಚಿತ ಎಂಬ ವಿಷಯವನ್ನು ‘ರಾವೆನ್‌’ ಟ್ರೇಲರ್‌ನಲ್ಲಿ ಹೇಳಲಾಗಿದೆ. ಒಂದಷ್ಟು ಕೌತುಕ, ಕುತೂಹಲಗಳನ್ನು ಹೊತ್ತು ನೋಡುಗರ ಗಮನ ಸೆಳೆಯುವಂತೆ ‘ರಾವೆನ್‌’ ಸಿನೆಮಾದ ಟ್ರೇಲರ್‌ ಮೂಡಿಬಂದಿದೆ. ‘ರಾವೆನ್‌’ ಟ್ರೇಲರ್‌ನಲ್ಲಿ ಛಾಯಾಗ್ರಹಣ, ಸಂಕಲನ, ಹಿನ್ನೆಲೆ ಸಂಗೀತ, ಮೇಕಿಂಗ್‌ ಎಲ್ಲವೂ ಉತ್ತಮ ಗುಣಮಟ್ಟದಲ್ಲಿದ್ದು, ಟ್ರೇಲರ್‌ ಒಂದಷ್ಟು ನಿರೀಕ್ಷೆ ಮೂಡಿಸುವಂತಿದೆ ಎಂದು ಹೇಳಬಹುದು.

ಬೃಹತ್‌ ಕಲಾವಿದರ ದಂಡು…

‘ರಾವೆನ್‌’ ಸಿನೆಮಾದ ಟ್ರೇಲರ್‌ನಲ್ಲಿ ಮಿಸ್ಟರಿ-ಕ್ರೈಂ-ಥ್ರಿಲ್ಲರ್‌ ವಿಷಯಗಳ ಜೊತೆಗೆ ಬೃಹತ್‌ ಕಲಾವಿದರ ತಾರಾಬಳಗವನ್ನೇ ಕಾಣಬಹುದಾಗಿದೆ. ಹಿರಿಯ ನಟರಾದ ಸುಚೇಂದ್ರ ಪ್ರಸಾದ್‌, ದಿನೇಶ್‌ ಮಂಗಳೂರು ಸಿನೆಮಾದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದು, ಉಳಿದಂತೆ ದೇವ್‌ ದೇವಯ್ಯ, ದಿಲೀಪ್‌ ಪೈ, ಪ್ರಬೀಕ್‌ ಮೊಗವೀರ್‌, ಸ್ವಪ್ನಾ ಶೆಟ್ಟಿಗಾರ್‌, ಲೀಲಾ ಮೋಹನ್‌, ವೆಂಕಟೇಶ್‌ ಮೊದಲಾದವರು ಸಿನೆಮಾದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

‘ರಾವೆನ್‌’ ಸಿನೆಮಾದ ಟ್ರೇಲರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಇದೇ ಬೇಸಿಗೆಯಲ್ಲಿ ‘ರಾವೆನ್‌’ ಪ್ರೇಕ್ಷಕರ ಮುಂದೆ…

ಸದ್ಯ ಟ್ರೇಲರ್‌ ಬಿಡುಗಡೆ ಮಾಡುವ ಮೂಲಕ ‘ರಾವೆನ್‌’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ಏಪ್ರಿಲ್‌ ಅಂತ್ಯದೊಳಗೆ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ. ‘ರಾವೆನ್‌’ ಸಿನೆಮಾವನ್ನು ಯುವ ನಿರ್ದೇಶಕ ವೇದ್‌ ನಿರ್ದೇಶನ ಮಾಡಿದ್ದು, ‘ಆತ್ಮ ಸಿನೆಮಾಸ್‌’ ಬ್ಯಾನರಿನಲ್ಲಿ ‘ರಾವೆನ್‌’ ಸಿನೆಮಾ ಮೂಡಿಬಂದಿದೆ. ನಿರ್ದೇಶಕ, ನಟ ಕಂ ನಿರ್ಮಾಪಕ ಪ್ರಬೀಕ್‌ ಮೊಗವೀರ್‌ ಮತ್ತು ವಿಶ್ವನಾಥ್‌ ಜಿ. ಪಿ. ಜಂಟಿಯಾಗಿ ‘ರಾವೆನ್‌’ ಸಿನೆಮಾಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಸದ್ಯ ಯು-ಟ್ಯೂಬ್‌ನಲ್ಲಿ ಬಿಡುಗಡೆಯಾಗಿ, ಒಂದಷ್ಟು ಸೌಂಡ್‌ ಮಾಡುತ್ತಿರುವ ‘ರಾವೆನ್‌’ ಥಿಯೇಟರಿನಲ್ಲಿ ಹೇಗೆ ಸೌಂಡ್‌ ಮಾಡಲಿದೆ ಎಂಬುದು ಇದೇ ಬಿರು ಬೇಸಿಗೆಯಲ್ಲಿ ಗೊತ್ತಾಗಲಿದೆ.

Related Posts

error: Content is protected !!