Video

‘ಎಕ್ಕ’ ಸಿನೆಮಾದ ಟೈಟಲ್ ಸಾಂಗ್ ರಿಲೀಸ್…

‘ಎಕ್ಕ’ ಚಿತ್ರದ ಮೊದಲ ಹಾಡು ಬಿಡುಗಡೆ

‘ಬಿಟ್ಟಿ ಶೋಕಿ ಭೂಮಿಗ್ ಭಾರ…’ ಮಾಸ್ ಹಾಡಿಗೆ ಯುವ ಮಸ್ತ್‌ ಸ್ಟೆಪ್ಸ್‌

ಪುನೀತ್‌ ರಾಜಕುಮಾರ್ ಹುಟ್ಟುಹಬ್ಬಕ್ಕೆ ‘ಎಕ್ಕ’ ಚಿತ್ರದ ಮೊದಲ ಗೀತೆ

‘ಯುವ’ ಸಿನೆಮಾದ ಬಳಿಕ ನಟ ಯುವ ರಾಜಕುಮಾರ್ ‘ಎಕ್ಕ’ ಸಿನೆಮಾದ ಮೂಲಕ ಹೊಸ ಅವತಾರವೆತ್ತಿರುವುದು ಅನೇಕರಿಗೆ ಗೊತ್ತೇ ಇದೆ. ಈಗಾಗಲೇ ಚಿತ್ರೀಕರಣದ ಹಂತದಲ್ಲಿಯೇ ಭಾರೀ ಹೈಪ್ ಕ್ರಿಯೇಪ್ ಕ್ರಿಯೇಟ್ ಮಾಡಿರುವ ‘ಎಕ್ಕ’ ಸಿನೆಮಾದ ಮೊದಲ ಹಾಡು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟುಹಬ್ಬ (ಮಾ. 17)ದಂದು ಬಿಡುಗಡೆ ಮಾಡಲಾಗಿದೆ.

ಯೂ-ಟ್ಯೂಬ್ ನಲ್ಲಿ ‘ಎಕ್ಕ’ ಹಾಡು ಹೊರಕ್ಕೆ…

‘ಆನಂದ್ ಆಡಿಯೋ’ ಯೂ-ಟ್ಯೂಬ್ ನಲ್ಲಿ ‘ಎಕ್ಕ’ ಸಿನೆಮಾದ ಈ ಟೈಟಲ್ ಸಾಂಗ್ ಅನಾವರಣಗೊಂಡಿದೆ. ‘ಎಕ್ಕಾ ಮಾರ್ ಮಾರ್…’ ಎಂಬ ಮಾಸ್‌ ಸಾಲುಗಳಿಂದ ಶುರುವಾಗುವ ಈ ಹಾಡಿಗೆ ನಾಯಕ ನಟ ಯುವ ರಾಜಕುಮಾರ್ ಚಿಂದಿ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಬಾಬಾ ಭಾಸ್ಕರ್ ಕೊರಿಯೋಗ್ರಫಿಗೆ ಯುವ ರಾಜಕುಮಾರ್‌  ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಈ ಹಾಡಿಗೆ ಯುವ ಸಾಹಿತಿ ನಾಗಾರ್ಜುನ್ ಶರ್ಮಾ ಕ್ಯಾಚಿ ಮ್ಯಾಚಿ ಪದ‌ಪೊಣಿಸಿ ಸಾಹಿತ್ಯ ಬರೆದಿದ್ದು, ಚರಣ್ ರಾಜ್ ಈ ಮಾಸ್‌ ಗೀತೆಗೆ ಸಂಗೀತ ಸಂಯೋಜಿಸಿದ್ದಾರೆ. ರೋಹಿತ್ ಪದಕಿ, ಚರಣ್ ರಾಜ್ ಹಾಗೂ ಮಹಾಲಿಂಗ್ ವಿ. ಎಂ. ವಾಯ್ಸ್, ಯುವ ಎನರ್ಜಿ ಎಲ್ಲವೂ ಈ ಹಾಡಿನಲ್ಲಿದ್ದು, ಟೋಟಲ್ ಆಗಿ ‘ಎಕ್ಕ’ ಟೈಟಲ್ ಟ್ರ್ಯಾಂಕ್ ಬೊಂಬಾಟ್ ಆಗಿ ಮೂಡಿಬಂದಿದೆ ಎಂಬುದು ‘ದೊಡ್ಮನೆ’ ಅಭಿಮಾನಿಗಳ ಮಾತು.

‘ಎಕ್ಕ’ ಸಿನೆಮಾದ ಮೊದಲ ಹಾಡು ‘ಬಿಟ್ಟಿ ಶೋಕಿ ಭೂಮಿಗ್ ಭಾರ… ಎಕ್ಕಾ‌ ಮಾರ್‌ಮಾರ್…’ ಎಂಬ ಗೀತೆಯನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಆಕ್ಷನ್-ಥ್ರಿಲ್ಲರ್ ‘ಎಕ್ಕ’ ಜೂ. 6ಕ್ಕೆ ತೆರೆಗೆ

ಅಶ್ವಿನಿ ಪುನೀತ್‌ ರಾಜಕುಮಾರ್‌ ಒಡೆತನದ ‘ಪಿ.ಆರ್‌.ಕೆ ಪ್ರೊಡಕ್ಷನ್ಸ್’, ‘ಕೆ.ಆರ್‌.ಜಿ ಸ್ಟುಡಿಯೋಸ್’ ಹಾಗೂ ‘ಜಯಣ್ಣ ಫಿಲ್ಮ್ಸ್’ ಜಂಟಿಯಾಗಿ ‘ಎಕ್ಕ’ ಸಿನೆಮಾಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿವೆ. ‘ಎಕ್ಕ’ ಚಿತ್ರ ಬಹಳ ಅದ್ಧೂರಿಯಾಗಿಯೇ ನಿರ್ಮಾಣವಾಗುತ್ತಿದ್ದು, ಆಕ್ಷನ್-ಥ್ರಿಲ್ಲರ್ ಕಥಾಹಂದರದ ‘ಎಕ್ಕ’ ಚಿತ್ರವನ್ನು ಇದೇ ವರ್ಷ ಜೂನ್ 6ಕ್ಕೆ ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ರೋಹಿತ್ ಪದಕಿ ಸಾರಥ್ಯದಲ್ಲಿ ಮೂಡಿ ಬರ್ತಿರುವ ‘ಎಕ್ಕ’ ಸಿನೆಮಾದಲ್ಲಿ ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಗಣ ಚಿತ್ರದಲ್ಲಿ. ಸಂಜನಾ ಆನಂದ್, ಸಂಪದಾ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ. ರೋಹಿತ್‍ ಪದಕಿ, ವಿಕ್ರಂ ಹತ್ವಾರ್ ಜೊತೆಗೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಇನ್ನು, ನಿರ್ದೇಶನವೂ ಅವರದ್ದೇ. ಚರಣ್ ರಾಜ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ ಮತ್ತು ದೀಪು ಎಸ್‍. ಕುಮಾರ್ ಸಂಕಲನ ‘ಎಕ್ಕ’ ಸಿನಿಮಾಗಿದೆ. ಒಬ್ಬ ಮನುಷ್ಯ ಭೂಗತ ಜಗತ್ತಿಗೆ ತುತ್ತಾದಾಗ ಆತನಿಗೆ ಆಗುವ ಅನುಭವವನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆಯಂತೆ.

Related Posts

error: Content is protected !!