Quick ಸುದ್ದಿಗೆ ಒಂದು click

2026ರ ಮಾ. 19ಕ್ಕೆ ಯಶ್‌ ‘ಟಾಕ್ಸಿಕ್’ ರಿಲೀಸ್!

‘ರಾಕಿಂಗ್ ಸ್ಟಾರ್’ ಯಶ್ ‘ಟಾಕ್ಸಿಕ್’ ರಿಲೀಸ್ ಡೇಟ್ ಅನೌನ್ಸ್ 

ಬಿಡುಗಡೆಯ ದಿನವನ್ನು ಅಧಿಕೃತವಾಗಿ ಘೋಷಿಸಿದ ‘ಕೆ.ವಿ.ಎನ್ ಪ್ರೊಡಕ್ಷನ್ಸ್’

ಕೊನೆಗೂ ಖಾತ್ರಿಯಾಯಿತು ‘ಟಾಕ್ಸಿಕ್’ ಚಿತ್ರದ ರಿಲೀಸ್ ಡೇಟ್

‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಟಾಕ್ಸಿಕ್’ ಸಿನೆಮಾದ ಬಿಡುಗಡೆ ಯಾವಾಗ? ಎಂದು ಯಶ್‌ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವುದು ಬಹುತೇಕ ಎಲ್ಲರಿಗೂ ಗೊತ್ತೇ ಇದೆ. ಈಗ ‘ಟಾಕ್ಸಿಕ್’ ಚಿತ್ರತಂಡದ ಕಡೆಯಿಂದ ಸಿನೆಮಾ ಬಿಡುಗಡೆಯ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿದೆ. ಹೌದು, ಇದೀಗ ‘ಟಾಕ್ಸಿಕ್’ ಚಿತ್ರದ ರಿಲೀಸ್ ಡೇಟ್ ಅಧಿಕೃತವಾಗಿ ಅನೌನ್ಸ್ ಆಗಿದೆ. ಮುಂದಿನ ವರ್ಷ ಅಂದರೆ, 2026ರ ಮಾರ್ಚ್‌ 19ರಂದು ‘ಟಾಕ್ಸಿಕ್’ ಸಿನೆಮಾ ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

‘ಟಾಕ್ಸಿಕ್’ ಸಿನೆಮಾವನ್ನು ನಿರ್ಮಾಣ ಮಾಡುತ್ತಿರುವ ‘ಕೆ.ವಿ.ಎನ್ ಪ್ರೊಡಕ್ಷನ್ಸ್’ ಅಧಿಕೃತವಾಗಿ ‘ಟಾಕ್ಸಿಕ್’  ಸಿನೆಮಾದ ಬಿಡುಗಡೆಯ ದಿನಾಂಕವನ್ನು ಸೋಶಿಯಲ್‌ ಮೀಡಿಯಾ ಮೂಲಕ ಅನಾವರಣಗೊಳಿಸಿದೆ. ಸದ್ಯ ‘ಟಾಕ್ಸಿಕ್’ ಸಿನೆಮಾ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಮಲೆಯಾಳಂ ನಿರ್ದೇಶಕಿ ಗೀತು ಮೋಹನ್‌ ದಾಸ್‌ ಈ ಸಿನೆಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಟಾಕ್ಸಿಕ್’ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ಭಾರತದ ಎಲ್ಲಾ ಭಾಷೆಗಳಲ್ಲೂ ‘ಟಾಕ್ಸಿಕ್’ ತೆರೆಗೆ ಬರುತ್ತಿದ್ದು, ಭಾರತದ ಜೊತೆಗೆ ಜಗತ್ತಿನ ಬೇರೆ ಬೇರೆ ಭಾಷೆಗಳಿಗೂ ‘ಟಾಕ್ಸಿಕ್’ ಸಿನೆಮಾವನ್ನು ತಲುಪಿಸುವ ಯೋಜನೆಯಲ್ಲಿದ್ದಾರೆ ನಿರ್ಮಾಪಕರು. ಒಟ್ಟಾರೆ ‘ಟಾಕ್ಸಿಕ್’ ಬಿಡುಗಡೆ ಯಾವಾ? ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು ಯಶ್‌ ಫ್ಯಾನ್ಸ್‌ ಅಂತೂ ಫುಲ್‌ ಖುಷ್‌ ಆಗಿದ್ದಾರೆ ಎನ್ನಬಹುದು.

Related Posts

error: Content is protected !!