‘ಪೆದ್ದಿ’ ಅವತಾರ ತಾಳಿದ ರಾಮ್ ಚರಣ್…

ರಾಮ್ ಚರಣ್ ಹೊಸಚಿತ್ರಕ್ಕೆ ‘ಪೆದ್ದಿ’ ಟೈಟಲ್ ಫಿಕ್ಸ್
ರಾಮ್ ಚರಣ್ – ಶಿವರಾಜಕುಮಾರ್ ನಟಿಸುತ್ತಿರುವ ‘ಪೆದ್ದಿ’ ಚಿತ್ರ
ಮಾಸ್ ಲುಕ್ ನಲ್ಲಿ ಚೆರ್ರಿ ಅಬ್ಬರ
‘ಗ್ಲೋಬಲ್ ಸ್ಟಾರ್’ ರಾಮ್ ಚರಣ್ ಹೊಸ ಅವತಾರ ತಾಳಿದ್ದಾರೆ. ಅವರ ಜನ್ಮದಿನದ ಅಂಗವಾಗಿ ‘RC16’ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಬುಚಿ ಬಾಬು ನಿರ್ದೇಶನದ ಈ ಚಿತ್ರದಲ್ಲಿ ರಾಮ್‌ಚರಣ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ಹೊಸ ಚಿತ್ರಕ್ಕೆ ‘ಪೆದ್ದಿ’ ಎಂಬ ವಿಭಿನ್ನ ಶೀರ್ಷಿಕೆ ಇಡಲಾಗಿದೆ. ‘ಪೆದ್ದಿ’ ಚಿತ್ರದ ಎರಡು ಪೋಸ್ಟರ್‌ಗಳು ಬಿಡುಗಡೆ ಆಗಿವೆ. ಒಂದರಲ್ಲಿ ಬೀಡಿ ಸೇದುತ್ತಿದ್ದರೆ, ಇನ್ನೊಂದರಲ್ಲಿ ಕೈಯಲ್ಲಿ ಬ್ಯಾಟ್ ಹಿಡಿದು ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.
‘ಪೆದ್ದಿ’ಯಲ್ಲಿ ರಾಮ್ ಚರಣ್ ಗೆ ಜೋಡಿಯಾಗಿ ಜಾನ್ವಿ ಕಪೂರ್ ಅಭಿನಯಿಸುತ್ತಿದ್ದು, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ಜಗಪತಿ ಬಾಬು, ದಿವ್ಯೆಂದು ಶರ್ಮಾ ತಾರಾ ಬಳಗದಲ್ಲಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್’, ಸುಕುಮಾರ್ ರೈಟಿಂಗ್ ಹಾಗೂ ‘ವೃದ್ಧಿ ಸಿನಿಮಾಸ್’ ಚಿತ್ರ ತಯಾರಾಗುತ್ತಿದ್ದು, ಎ. ಆರ್. ರೆಹಮಾನ್ ಸಂಗೀತ, ನವೀನ್ ನೂಲಿ ಸಂಕಲನ, ಆರ್. ರತ್ನವೇಲು ಛಾಯಾಗ್ರಹಣ ಚಿತ್ರಕ್ಕಿದೆ.