ಪುರಿ – ಸೇತುಪತಿ ಕಾಂಬಿನೇಷನ್ ಸಿನೆಮಾ ಶುರು!

ವಿಜಯ್ ಸೇತುಪತಿ ಚಿತ್ರಕ್ಕೆ ಪುರಿ ಜಗನ್ನಾಥ್ ಆಕ್ಷನ್ ಕಟ್…
2025 ಜೂನ್ ನಿಂದ ಹೊಸ ಚಿತ್ರದ ಚಿತ್ರೀಕರಣ ಪ್ರಾರಂಭ
ಡೆಡ್ಲಿ ಕಾಂಬಿನೇಷನ್ ನಲ್ಲಿ ಅದ್ಧೂರಿ ಸಿನೆಮಾ
ತೆಲುಗಿನ ಡ್ಯಾಷಿಂಗ್ ಡೈರೆಕ್ಟರ್ ಪುರಿ ಜಗನ್ನಾಥ್ ಮೊದಲ ಬಾರಿಗೆ ‘ಮಕ್ಕಳ್ ಸೆಲ್ವನ್’ ಖ್ಯಾತಿಯ ವಿಜಯ್ ಸೇತುಪತಿ ಜೊತೆ ಕೈ ಜೋಡಿಸಿದ್ದಾರೆ. ‘ಯುಗಾದಿ ಹಬ್ಬ’ದ ವಿಶೇಷವಾಗಿ ಪುರಿ ಜಗನ್ನಾಥ್ ತಮ್ಮ ಮುಂದಿನ ಚಿತ್ರದ ಬಗ್ಗೆ ಬಿಗ್ ಅಪ್ ಕೊಟ್ಟಿದ್ದಾರೆ.
ಬಹಳ ದಿನಗಳಿಂದಲೂ ಈ ಡೆಡ್ಲಿ ಕಾಂಬಿನೇಷನ್ ಒಂದಾಗಲಿದೆ ಎಂಬ ಮಾತು ಕೇಳಿ ಬಂದಿತ್ತು. ಅದರಂತೆ ಇಂದು ಪುರಿ ಜಗನ್ನಾಥ್ ತಮ್ಮ ಮುಂದಿನ ಚಿತ್ರವನ್ನು ವಿಜಯ್ ಸೇತುಪತಿ ಜೊತೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ವಿಜಯ್ ಸೇತುಪತಿಯವರಿಗಾಗಿಯೇ ಪುರಿ ಒಂದೊಳ್ಳೆ ಅದ್ಭುತ ಕಥೆಯನ್ನು ಸಿದ್ದಪಡಿಸಿಕೊಂಡಿದ್ದು, ಹಿಂದೆಂದೂ ಕಾಣದ ಲುಕ್ ನಲ್ಲಿ ಅವರನ್ನು ಪ್ರೇಕ್ಷಕರಿಗೆ ತೋರಿಸಲಿದ್ದಾರೆ.
‘ಪುರಿ ಕನೆಕ್ಟ್ಸ್’ ಬ್ಯಾನರ್ ನಡಿ ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿದ್ದು, 2025ರ ಜೂನ್ ತಿಂಗಳಿನಿಂದ ಈ ಹೊಸ ಸಿನೆಮಾ ಚಿತ್ರೀಕರಣ ಶುರುವಾಗಲಿದೆ. ಇತ್ತೀಚೆಗೆ ವಿಜಯ್ ಸೇತುಪತಿ ಅಭಿನಯದ ‘ಮಹಾರಾಜ’ ಸಿನೆಮಾ ಬಾಕ್ಸಾಫೀಸ್ ನಲ್ಲಿ ದಾಖಲೆ ಬರೆದಿತ್ತು. ಹೀಗಾಗಿ ಸೇತುಪತಿ ಮುಂದಿನ ಪ್ರಾಜೆಕ್ಟ್ ಏನು ಎಂಬ ಕುತೂಹಲಕ್ಕೀಗ ತೆರೆಬಿದ್ದಿದೆ.