‘ZEE 5’ನಲ್ಲಿ ‘ಅಯ್ಯನ ಮನೆ’ ಮಿನಿ ವೆಬ್ ಸೀರೀಸ್ ಸ್ಟ್ರೀಮಿಂಗ್!

ಏ. 25ರಿಂದ ‘ಅಯ್ಯನ ಮನೆ’ ಮಿನಿ ವೆಬ್ ಸೀರೀಸ್ ಸ್ಟ್ರೀಮಿಂಗ್
ರಮೇಶ್ ಇಂದಿರಾ ನಿರ್ದೇಶನದಲ್ಲಿ ಮೂಡಿ ಬರ್ತಿರುವ ‘ಅಯ್ಯನ ಮನೆ’
ಏಳು ಎಪಿಸೋಡ್ ಹೊಂದಿರುವ ವೆಬ್ ಸೀರೀಸ್
ಭಾರತೀಯ ಚಿತ್ರರಂಗದ ಹೆಸರಾಂತ ಒಟಿಟಿ ಫ್ಲಾರ್ಟ್ ಫಾರಂಗಳಲ್ಲೊಂದು ZEE 5. ಹಲವು ಸೂಪರ್ ಹಿಟ್ ಸಿನಿಮಾಗಳು ಈ ಒಟಿಟಿ ಫ್ಲಾರ್ಟ್ ನಲ್ಲಿ ಲಭ್ಯವಿದೆ. ಇದೀಗ ZEE 5 ಮತ್ತೊಂದು ಹೊಸ ಸಾಹಸ ಮಾಡಿದ್ದು, ಕನ್ನಡ ಸಿನಿಮಾ ಪ್ರೇಮಿಗಳಿಗಾಗಿ ಮಿನಿ ವೆಬ್ ಸೀರೀಸ್ ನ್ನು ಪರಿಚಯಿಸಿದೆ. ZEE 5 ನಿಂದ ಬರ್ತಿರುವ ಮೊದಲ ಕನ್ನಡ ಮಿನಿ ವೆಬ್ ಸೀರೀಸ್ ನ್ನು ಖ್ಯಾತ ನಿರ್ದೇಶಕ ಹಾಗೂ ಕಲಾವಿದರ ರಮೇಶ್ ಇಂದಿರಾ ನಿರ್ಮಾಣ ಮಾಡಿದ್ದಾರೆ. ಆ ಸೀರೀಸ್ ಗೆ ‘ಅಯ್ಯನ ಮನೆ’ ಎಂದು ಟೈಟಲ್ ಇಡಲಾಗಿದೆ. ಪ್ರತಿ ಮನೆಯೂ ಸ್ವರ್ಗವಾಗಿರುವುದಿಲ್ಲ. ಅಲ್ಲಿ ಎಷ್ಟೋ ಮುಚ್ಚಿಟ್ಟ ವಿಷಯಗಳು ಇರುತ್ತವೆ ಅನ್ನೋದನ್ನು ಈ ಮಿನಿ ಸೀರೀಸ್ ಮೂಲಕ ರಮೇಶ್ ಇಂದಿರಾ ಹೇಳಲು ಹೊರಟಿದ್ದಾರೆ.
ರಮೇಶ್ ಇಂದಿರಾ ನಿರ್ದೇಶನದ ‘ಅಯ್ಯನ ಮನೆ’
ರಮೇಶ್ ಇಂದಿರಾ ನಿರ್ದೇಶನದಲ್ಲಿ ಮೂಡಿ ಬರ್ತಿರುವ ‘ಅಯ್ಯನ ಮನೆ’ ವೆಬ್ ಸೀರೀಸ್ ಗೆ ‘ಶೃತಿ ನಾಯ್ಡು ಪ್ರೊಡಕ್ಷನ್’ ನಿರ್ಮಾಣ ಮಾಡಿದೆ. ಏಳು ಎಪಿಸೋಡ್ ಹೊಂದಿರುವ ವೆಬ್ ಸೀರೀಸ್ ನಲ್ಲಿ ಖುಷಿ ರವಿ, ಅಕ್ಷಯ್ ನಾಯಕ್, ಮಾನಸಿ ಸುಧೀರ್ ಅಭಿನಯಿಸಿದ್ದಾರೆ. ಇದು ಭಯ, ನಂಬಿಕೆ ಮತ್ತು ವಿಧಿ ಘರ್ಷಿಸುವ ಕಥೆಯನ್ನೊಳಗೊಂಡಿದ್ದು, ಇದೇ ತಿಂಗಳ 25ರಿಂದ ‘ZEE 5’ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
‘ಅಯ್ಯನ ಮನೆ’ಯಲ್ಲಿ ಮಿಸ್ಟ್ರೀ ಕಥೆ !
ಚಿಕ್ಕಮಗಳೂರಿನ ‘ಅಯ್ಯನ ಮನೆ’ ಕುಟುಂಬದಲ್ಲಿ ಅಡಗಿರುವ ಸತ್ಯಗಳ ಸುತ್ತಕಥೆ ಸಾಗುತ್ತದೆ. ಇದೊಂದು ಮಿಸ್ಟ್ರೀ ಕಥೆಯೊಳಗೊಂಡಿದ್ದು, ಪ್ರೇಕ್ಷಕರನ್ನು ಪ್ರತಿ ಕ್ಷಣ ಎಕ್ಸೈಟ್ ಆಗುವಂತೆ ಮಾಡುತ್ತದೆ. ಈಗಾಗಲೇ ಹಲವು ಹಿಟ್ ಚಿತ್ರ ಕೊಟ್ಟುರುವ ರಮೇಶ್ ಇಂದಿರಾ ಹೊಸ ಬಗೆಯ ಕಥೆಯ ಮೂಲಕ ಒಟಿಟಿ ಪ್ರೇಕ್ಷಕರನ್ನು ತಲುಪಲಿದ್ದಾರೆ.
‘ಅಯ್ಯನ ಮನೆ’ ವೆಬ್ ಸೀರೀಸ್ ಬಗ್ಗೆ ನಿರ್ದೇಶಕರಾದ ರಮೇಶ್ ಇಂದಿರಾ ಮಾತನಾಡಿ, ”ಅಯ್ಯನ ಮನೆ’ ರೋಚಕತೆ ಜೊತೆಗೆ ಭಯ, ನಂಬಿಕೆ ಮತ್ತು ಫ್ಯಾಮಿಲಿ ಕಥೆಯೊನ್ನೊಳಗೊಂಡಿದೆ. ಈ ವೆಬ್ ಸರಣಿ ಕರ್ನಾಟಕ ಸಂಸ್ಕೃತಿ, ಸಂಪ್ರದಾಯದವನ್ನು ಅನಾವರಣ ಮಾಡುತ್ತದೆ. ‘ಅಯ್ಯನ ಮನೆ’ ವೆಬ್ ಸರಣಿ ಪ್ರೇಕ್ಷಕರನ್ನು ಸೀಟಿನ ತುದಿಗೆ ಕುರುವಂತೆ ಮಾಡುತ್ತದೆ’ ಎಂದರು.
ಜಾಜಿ ಪಾತ್ರ ಮಾಡಿರುವ ಖುಷಿ ರವಿ ಮಾತನಾಡಿ, ‘ಮುಗ್ದತೆ, ಗಂಡನ ಪ್ರೀತಿಯ ಹೆಂಡತಿ, ಸಂಪ್ರದಾಯಕ್ಕೆ ನಡೆದುಕೊಳ್ಳುವ ಹೆಣ್ಣು ಮಗಳಾಗಿ ನಟಿಸಿದ್ದೇನೆ. ಇದೊಂದು ಎಮೋಷನ್ ಪಯಣ. ಜೊತೆಗೆ ಅನೇಕ ರಹಸ್ಯಗಳ ಕಥಾಹಂದರ. ನಾನು ವೆಬ್ ಸರಣಿ ನೋಡಲು ಕಾತರಳಾಗಿದ್ದೇನೆ’ ಎಂದು ತಿಳಿಸಿದ್ದಾರೆ.