ಹೊರಬಂತು ‘ಫೈರ್ ಫ್ಲೈ’ ಟ್ರೇಲರ್…

ಶಿವಣ್ಣನ ಪುತ್ರಿ ನಿರ್ಮಾಣದ ಚಿತ್ರದ ಟ್ರೇಲರ್ ರಿಲೀಸ್
ಕಾಮಿಡಿ ಕಿಕ್ ಜೊತೆಗೆ ಎಮೋಶನಲ್ ಟಚ್ ಇರುವ ‘ಫೈರ್ ಫ್ಲೈ’ ಟ್ರೇಲರ್
ಸ್ಪೆಷಲ್ ಗೆಪಟ್‌ನಲ್ಲಿ ಕಾಣಿಸಿಕೊಂಡ ಶಿವರಾಜಕುಮಾರ್
ನಟ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್ ‘ಶ್ರೀ ಮುತ್ತು ಸಿನಿ ಸರ್ವಿಸ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ‘ಫೈರ್ ಫ್ಲೈ’ ಸಿನೆಮಾ ಇದೇ ಏಪ್ರಿಲ್ 24ಕ್ಕೆ ತೆರೆಗೆ ಬರುತ್ತಿದೆ. ವಂಶಿ ಕೃಷ್ಣ ನಟಿಸಿ, ನಿರ್ದೇಶಿಸಿರುವ ಈ ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಇದೀಗ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಸದ್ಯ ‘ಫೈರ್ ಫ್ಲೈ’ ಸಿನೆಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ‘ಫೈರ್ ಫ್ಲೈ’ ಸಿನೆಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.
ಹೇಗಿದೆ ‘ಫೈರ್ ಫ್ಲೈ’ ಸಿನೆಮಾದ ಟ್ರೇಲರ್…?
‘ಫೈರ್ ಫ್ಲೈ’ ಸಿನೆಮಾದ ಟ್ರೇಲರ್ ನಲ್ಲಿ ವಿಕ್ಕಿ ಎಂಬ ಹೆಸರಿನ ಹುಡುಗನೊಬ್ಬನ ತವಕ, ತಲ್ಲಣಗಳನ್ನು ಮನರಂಜನಾತ್ಮಕವಾಗಿ ಕಟ್ಟಿಕೊಡಲಾಗಿದೆ. ಕಾಮಿಡಿಯ ಜೊತೆಗೆ ಒಂದಷ್ಟು ಎಮೋಶನಲ್ ವಿಷಯಗಳನ್ನು ಟ್ರೇಲರಿನಲ್ಲಿ ತೆರೆದಿಡಲಾಗಿದೆ. ಯುವ ಪ್ರತಿಭೆ ವಂಶಿ ತೆರೆ ಮೇಲೆ ನಾಯಕ ನಟನಾಗಿ, ತೆರೆಹಿಂದೆ ನಿರ್ದೇಶಕನಾಗಿ ‘ಫೈರ್ ಫ್ಲೈ’ ಸಿನೆಮಾದಲ್ಲಿ ‘ಡಬಲ್ ರೋಲ್’ ಪ್ಲೇ ಮಾಡಿದ್ದಾರೆ. ಉಳಿದಂತೆ ‘ಫೈರ್ ಫ್ಲೈ’ ಸಿನೆಮಾದ ಟ್ರೇಲರ್ ನಲ್ಲಿ ನಾಯಕ ವಂಶಿಗೆ ಜೋಡಿಯಾಗಿ ರಚನಾ ಇಂದರ್ ಸಾಥ್ ಕೊಟ್ಟಿದ್ದು, ಅಚ್ಯುತ್ ಕುಮಾರ್, ಸುಧಾರಾಣಿ, ಶೀತಲ್ ಶೆಟ್ಟಿ, ಆನಂದ್ ನೀನಾಸಂ, ಚಿತ್ಕಲಾ ಬಿರಾದರ್, ಮೂಗು ಸುರೇಶ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಸಿಕೊಂಡಿದ್ದಾರೆ. ಇನ್ನು ‘ಫೈರ್ ಫ್ಲೈ’ ಸಿನೆಮಾದ ಟ್ರೇಲರ್‌ನ ಕೊನೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದ್ದಾರೆ.
‘ಫೈರ್ ಫ್ಲೈ’ ಸಿನಿಮಾದ ಸಿನೆಮಾದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಇದೇ ತಿಂಗಳಾಂತ್ಯಕ್ಕೆ ‘ಫೈರ್ ಫ್ಲೈ’ ಸಿನೆಮಾ ರಿಸೆಲ್ಟ್…
‘ಫೈರ್ ಫ್ಲೈ’ ಸಿನೆಮಾದ ಹಾಡುಗಳಿಗೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಅಭಿಲಾಷ್ ಕಳತ್ತಿ ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ, ಸುರೇಶ್ ಆರ್ಮುಗಮ್ ಸಂಕಲನವಿದೆ. ವರದರಾಜ್ ಕಾಮತ್ ಕಲೆ, ಅರ್ಜುನ್ ರಾಜ್ ಸಾಹಸ, ರಾಹುಲ್ ಮಾಸ್ಟರ್ ನೃತ್ಯ ಸಂಯೋಜನೆ ‘ಫೈರ್ ಫ್ಲೈ’ ಚಿತ್ರಕ್ಕಿದೆ. ಒಟ್ಟಾರೆ ಟ್ರೇಲರ್ ಮೂಲಕ ನಿಧಾನವಾಗಿ ಸದ್ದು ಮಾಡುತ್ತಿರುವ ‘ಫೈರ್ ಫ್ಲೈ’ ಸಿನೆಮಾ ಥಿಯೇಟರಿನಲ್ಲಿ ಹೇಗೆ ಸಿನಿಪ್ರಿಯರ ಮನ ಗೆಲ್ಲಲಿದೆ ಎಂಬುದು ಇದೇ ಏಪ್ರಿಲ್ ಅಂತ್ಯದ ವೇಳೆಗೆ ಗೊತ್ತಾಗಲಿದೆ.