ಸೌತ್ ಸಿನಿರಂಗದತ್ತ ಬಾಲಿವುಡ್ ಬ್ಯೂಟಿ ಟಬು…

ವಿಜಯ್ ಸೇತುಪತಿ – ಪುರಿ ಜಗನ್ನಾಥ್ ಚಿತ್ರಕ್ಕೆ ಟಬು ಎಂಟ್ರಿ
ದಕ್ಷಿಣ ಭಾರತದತ್ತ ಬಾಲಿವುಡ್ ಬ್ಯೂಟಿ ಟಬು ಚಿತ್ತ
ಚಿತ್ರದ ಕಥೆ ಕೇಳಿ ಟಬು ಎಕ್ಸೈಟ್!
ತೆಲುಗಿನ ಡ್ಯಾಷಿಂಗ್ ಡೈರೆಕ್ಟರ್ ಪುರಿ ಜಗನ್ನಾಥ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ಸೇತುಪತಿ ಕಾಂಬೋದ ಹೊಸ ಚಿತ್ರದ ಬಗ್ಗೆ ಲೇಟೆಸ್ಟ್ ಸುದ್ದಿಯೊಂದು ಸಿಕ್ಕಿದೆ. ‘ಯುಗಾದಿ ಹಬ್ಬ’ಕ್ಕೆ ಈ ಜೋಡಿ ಮೊದಲ ಬಾರಿಗೆ ಕೈ ಜೋಡಿಸಿರುವ ಬಗ್ಗೆ ಮಾಹಿತಿ ನೀಡಿತ್ತು. ಇದೀಗ ಪುರಿ ಜಗನ್ನಾಥ್ ಹೊಸ ಪ್ರಾಜೆಕ್ಟ್ ಬಾಲಿವುಡ್ ಪ್ರತಿಭಾನ್ವಿತ ನಟಿ ಟಬು ಎಂಟ್ರಿ ಕೊಟ್ಟಿದ್ದಾರೆ.
ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದ ಟಬು ವಿಜಯ್ ಸೇತುಪತಿ ನಾಯಕನಾಗಿ ನಟಿಸುತ್ತಿರುವ ಈ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ನಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ತಮ್ಮ ಪಾತ್ರ ಹಾಗೂ ಚಿತ್ರದ ಕಥೆ ಕೇಳಿ ಟಬು ಎಕ್ಸೈಟ್ ಆಗಿದ್ದಾರೆ. ಜೂನ್ ನಿಂದ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯುತ್ತಿದೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಹಿಂದೆಂದೂ ಕಾಣದ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಪುರಿ ಕನೆಕ್ಟ್ಸ್’ ಬ್ಯಾನರ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುವುದು. ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ನಿರ್ಮಾಪಕರಾಗಿ ಚಿತ್ರಕ್ಕೆ ಸಾಥ್ ಕೊಡುತ್ತಿದ್ದಾರೆ.