‘ಎಕ್ಕ’ ಟೀಸರ್ ರಿಲೀಸ್; ಪೊರಕೆ ಹಿಡಿದು ಯುವ ಎಂಟ್ರಿ…!

‘ಎಕ್ಕ’ ಟೀಸರ್‌ನಲ್ಲಿ ಯುವ ರಾಜಕುಮಾರ್ ಹೊಸ ಅವತಾರ
ರಾಜಕುಮಾರ್ ಹುಟ್ಟುಹಬ್ಬದ ಅಂಗವಾಗಿ ‘ಎಕ್ಕ’ ಟೀಸರ್ ಬಿಡುಗಡೆ…
ಡಿಫರೆಂಟ್ ಅವತಾರದಲ್ಲಿ ಸೈಕ್ ಆಗಿದೆ ಯುವ ಟೀಸರ್
ವರನಟ ಡಾ. ರಾಜಕುಮಾರ್ ಮೊಮ್ಮಗ ಯುವ ರಾಜಕುಮಾರ್ ಅಭಿನಯದ ಎರಡನೇ ಸಿನೆಮಾ ‘ಎಕ್ಕ’ ಬಿಡುಗಡೆಗೆ ಸಿದ್ದವಾಗುತ್ತಿದೆ. ಸದ್ಯ ‘ಎಕ್ಕ’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ವರನಟ ಡಾ. ರಾಜಕುಮಾರ್ ಮತ್ತು ಯುವ ರಾಜಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಏಪ್ರಿಲ್ 24ರ ಗುರುವಾರ, ‘ಎಕ್ಕ’ ಸಿನೆಮಾದ ಟೀಸರ್ ಅನ್ನು ಬಿಡುಗಡೆ ಮಾಡಿದೆ.
ಹೇಗಿದೆ ‘ಎಕ್ಕ’ ಟೀಸರ್…?
ಸುಮಾರು 1 ನಿಮಿಷ 9 ಸೆಕೆಂಡ್ ಅವಧಿಯ ಯುವ ರಾಜಕುಮಾರ್ ಅಭಿನಯದ ‘ಎಕ್ಕ’ ಸಿನೆಮಾದ ಟೀಸರ್ ಸಖತ್ ಮಾಸ್ ಆಗಿ ಮೂಡಿಬಂದಿದೆ. ಸೈಕ್ ಸ್ಟೈಲ್ ನಲ್ಲಿ ‘ಎಕ್ಕ’ ಟೀಸರ್ ಕಟ್ಟಿಕೊಡಲಾಗಿದ್ದು, ಹೊಸ ಅವತಾರದಲ್ಲಿ ಯುವ ರಾಜಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ‘ಮಗು-ಮೃಗ’ ಅಂತಾ ಮಸ್ತ್ ಡೈಲಾಗ್ ಹೊಡೆಯುತ್ತಾ, ಕೈಯಲ್ಲಿ ಪೊರಕೆ ಹಿಡಿದು ವಿಭಿನ್ನ ಅವತಾರದಲ್ಲಿ ಯುವ ಕಾಣಿಸಿಕೊಂಡಿದ್ದಾರೆ. ‘ಇನ್ನೊಂದ್ ವಿಷ್ಯ ಇದು ಇಲ್ಲಿಗೆ ನಿಲ್ಲೋದಿಲ್ಲ…’ ಎಂಬ ಡೈಲಾಗ್ ನಲ್ಲಿ ‘ಎಕ್ಕ’ ಟೀಸರ್ ಕೊನೆಯಾಗುತ್ತದೆ. ‘ಎಕ್ಕ’ ಟೀಸರ್ ನೋಡಿದವರು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಜಾಕಿ’ ಸಿನೆಮಾದ ಗೆಟಪ್‌ನಲ್ಲಿ ಯುವ ರಾಜಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ‘ಜಾಕಿ’ ಸಿನೆಮಾದಲ್ಲಿರುವಂತೆ, ಔಟ್ ಆಂಡ್ ಔಟ್ ಮಾಸ್ ಕಮರ್ಷಿಯಲ್ ಕಂಟೆಂಟ್ ಈ ಸಿನೆಮಾದಲ್ಲೂ ಇರಬಹುದು ಕಾಮೆಂಟ್ಸ್ ಮಾಡುತ್ತಿದ್ದಾರೆ.
ಯುವ ರಾಜಕುಮಾರ್ ಅಭಿನಯದ ‘ಎಕ್ಕ’ ಸಿನೆಮಾದ ಟೀಸರ್ ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಮಾಸ್ ಕಂಟೆಂಟ್, ಮಸ್ತ್ ಎಂಟರ್‌ಟೈನ್ಮೆಂಟ್!
‘ಎಕ್ಕ’ ಟೀಸರ್ ನೋಡಿದವರಿಗೆ ಇದೊಂದು ಪಕ್ಕಾ ಮಾಸ್ ಸಿನೆಮಾ ಎಂಬುದು ಅರ್ಥವಾಗುತ್ತದೆ. ಮಾಸ್ ಕಂಟೆಂಟ್ ಜೊತೆಗೆ ಅದ್ದೂರಿ ಮೇಕಿಂಗ್, ಮ್ಯೂಸಿಕ್, ಆಕ್ಷನ್ ಹೀಗೆ ಮಸ್ತ್ ಕಂಟೆಂಟ್ ‘ಎಕ್ಕ’ ಟೀಸರ್‌ನಲ್ಲಿ ಕಾನಬಹುದಾಗಿದೆ. ಯುವ ಆಕ್ಟಿಂಗ್, ರೋಹಿತ್ ಪದಕಿ ಟೇಕಿಂಗ್, ಚರಣ್ ರಾಜ್ ಮ್ಯೂಸಿಕ್ ಕಿಕ್ ಟೀಸರ್ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ‘ಎಕ್ಕ’ ಸಿನೆಮಾದ ಟೈಟಲ್ ಟ್ರ್ಯಾಕ್, ಒಂದಷ್ಟು ಮಂದಿಯ ಗಮನ ಸೆಳೆಯಲು ಯಶಸ್ವಿಯಾಗಿದ್ದು, ಈಗ ಟೀಸರ್ ಸರದಿ.
ಜೂನ್ ಮೊದಲವಾರ ‘ಎಕ್ಕ’ ತೆರೆಗೆ
ರೋಹಿತ್ ಪದಕಿ ನಿರ್ದೇಶನದ ಈ ಚಿತ್ರದಲ್ಲಿ ಯುವ ರಾಜಕುಮಾರ್ ನಾಯಕನಾಗಿ, ಸಂಪದ ಹಾಗೂ ಸಂಜನಾ ಆನಂದ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಗಣ ಚಿತ್ರದಲ್ಲಿ. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ ಮತ್ತು ದೀಪು ಎಸ್. ಕುಮಾರ್ ಸಂಕಲನ ಒದಗಿಸಿದ್ದಾರೆ.
ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ರಾಜ್ ಅವರ ‘ಕೆಆರ್‌ಜಿ ಸ್ಟುಡಿಯೋಸ್’, ಜಯಣ್ಣ ಹಾಗೂ ಭೋಗೇಂದ್ರ ಅವರ ‘ಜಯಣ್ಣ ಫಿಲ್ಮ್ಸ್’, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ‘ಪಿಆರ್‌ಕೆ ಪ್ರೊಡಕ್ಷನ್ಸ್’ ಈ ಸಿನೆಮಾವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಸದ್ಯ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಇದೇ 2025ರ ಜೂನ್ 6 ರಂದು ‘ಎಕ್ಕ’ ಸಿನೆಮಾ ತೆರೆಗೆ ಬರುತ್ತಿದೆ.